Monday, May 16, 2011

ಮೇಲಾ?? ಫೀಮೇಲಾ????

ಅತ್ತಿಗೆ ಗರ್ಭಿಣಿ!! ಮನೆಲ್ಲೆಲ್ಲಾ ಫುಲ್ಲ್ ಖುಷಿ.....ಬರೋ ಪಾಪುವಿನ ಬಗ್ಗೆ ಸಾವಿರಾರು ಅಸಂಪ್ಶನ್ಸ್, ನೂರಾರು ಹೆಸರುಗಳು, ಪಾಪುವಿನ ಕಲರ್ರು , ಮುಖ, ಕೂದ್ಲು, ಅದರ ಸೈಜ಼ು ಎಟ್ಸೆಟರ ಎಟ್ಸೆಟರ ಎಟ್ಸೆಟರ......
ಆದ್ರೆ...ನಮ್ಮ ಚಿಂತೆನೇ ಬೇರೆ... ಮಗುವಿನ ಲಿಂಗ!!
ಗಂಡಾದ್ರೆ ನಮ್ಮನೆಯ ದೊಡ್ಡ ಗಂಡು ಪಡೆಗೆ ಇನ್ನೊಂದು ಸೇರ್ಪಡೆ!! ಆದ್ರೆ ಹೆಣ್ಣಾದ್ರೆ ನಮ್ಮೆಲ್ಲರ ಅರ್ಧ ಕಿಲೋ ಎಕ್ಸ್‌ಟ್ರಾ ಪ್ರೀತಿ + ನಮ್ಮ ಮುದ್ದು + ನಮ್ಮೆಲ್ಲರ ಗಿಫ್ಟ್ಸ್ ... ಒಟ್ನಲ್ಲಿ ಆವ್ಳು ಉಧ್ಧಾರ ಆಗೋ ಯಾವ ಚಾನ್ಸ್ ಕೂಡ ಇಲ್ಲ!!
ಓಹ್..... ಬೈ ದ ವೇ....ಈ ಬ್ಲಾಗ್ ಬರೆಯೋ ರೀಸನ್ ಏನೂ ಅಂದ್ರೆ..... ಇಲ್ಲಿ ನಾನು , ಶಶಿ, ಶೆಟ್ಟಿ, ದರ್ಶನ, ಅತ್ತಿಗೆ, ಸ್ಮಿತಾ ಎಲ್ಲರೂ ಕೂತ್ಕೊಂಡು ಮಗು ಗಂಡೋ ಹೆಣ್ಣೋ ಅಂತ ಮಾತಾಡ್ತಾ ಇದ್ವಿ.....
ಸೋ ನಮ್ಮ ನಮ್ಮ ಗೆಸ್-ಗಳು ಇಲ್ಲಿವೆ.....
ಯಾರು ಗೆಲ್ತಾರೊ ಅವರಿಗೆ ಸೋತವರು ತಲಾ ಒಂದು ಸಾವಿರ ರೂಪಾಯಿ ಕೊಡಬೇಕು ಅಂತ ಡಿಸೈಡ್ ಮಾಡಿದೀವಿ!!
ಇಗೋ ಇಲ್ಲಿವೆ ನಮ್ಮ ಗೆಸ್ಸುಗಳು...
೧) ಶಶಿ :- ಹೆಣ್ಣು!!
೨) ಹರ್ಷ:- ಗಂಡು!!
೩) ದರ್ಶನ:- ಹೆಣ್ಣು!!
೪) ಶೆಟ್ಟಿ:- ಹೆಣ್ಣು!!
೫) ಸ್ಮಿತಾ :- ಹೆಣ್ಣು!!

ಸೋ!! ೫ ಜನರಲ್ಲಿ ೪ ಹೆಣ್ಣು ಆಗತ್ತೆ ಅಂದ್ರೆ ನಾನು ಗಂಡು ಆಗತ್ತೆ ಅಂತ ಹೇಳಿದೀನಿ!!
ಮರ್ಯಾದೆ ಕಾಪಾಡು ಅತ್ತಿಗೆ!

ಟು ಬಿ ಕಂಟಿನ್ಯೂಡ್ ಆಫ್ಟರ್ ೩ ಮಂತ್ಸ್!!

-ಹರ್ಷ!!