Thursday, February 26, 2009

ಮತ್ತೇರಿಸುವ ಕೊಯಿಮ್ಮತ್ತೂರು !!!!

ಹಾಗೆ ತುಂಬಾ ದಿನ ಆಯ್ತು ನನ್ನ ಬ್ಲಾಗ್ ನೋಡೇ ಇಲ್ಲಾ...ಇಷ್ಟು ಕೆಲಸ ಮಾಡೋದು ಸರಿ ಅಲ್ಲ...ಸೊ ಇವತ್ತು ಸಲ್ಪ ಕಷ್ಟಾ ಅದರೂ ಪರವಾಗಿಲ್ಲ ಏನಾದರೂ ಗೀಚೋಣ ಅಂತ ಮನಸ್ಸು ಮಾಡಿ ಕುಳಿತಿದೀನಿ ನನ್ನ ಕ್ಯುಬಿಕಲ್ಲಲ್ಲಿ..
ನನ್ನವರು, ನನ್ನ ಪರಿವಾರ , ಗೆಳೆಯರು, ಬಂಧು-ಬಳಗ, ಹರಟೆ ಮಿತ್ರರು, ಬೆಕಾಗಿರೋರು ಬೇಡದೆ ಇರೋರು ಎಲ್ಲರನ್ನು ಬಿಟ್ಟು ಇಲ್ಲಿ ಯಾವುದೊ ಊರಿನ ಯಾವುದೊ ಭಾಷೆಯ ಯಾವುದೊ ಸೀಮೆಯ ಜನರ ಮಧ್ಯೆ ನನ್ನ ಜೀವನ ಸಾಗಿಸುತ್ತಾ... ಹೊಟ್ಟೆಗಾಗಿ -ಗೇಣು ಬಟ್ಟೆಗಾಗಿ ಎಂದು ಇಲ್ಲಿ ಕೊಯಮ್ಬತ್ತೂರಿನ ಸೆಕೆಯಲ್ಲಿ ನನ್ನ ಮೈ ಕಾಂತಿಯ ಮಾರಣಹೋಮ ಮಾಡಿಕೊಳ್ಳುತ್ತಾ ನನ್ನನು ನಾನೇ ಹವಿಸ್ಸಾಗಿ ಸೂರ್ಯದೇವನ ಬೇಗೆಗೆ ಅರ್ಪಿಸಿಕೊಳ್ಳುತ್ತಾ ಜೀವನ ಸಾಗಿಸುತ್ತಾ ಇದ್ದೇನೆ...
ಇರೋದಕ್ಕೆ ಮನೆ ಇದೆ.. ಹರಟೆಗೆ ಮಿತ್ರರು ಸಾಕಷ್ಟು ಇದ್ದಾರೆ ..ಅಡುಗೆ ಮಾಡ್ತಾ ಇದೀನಿ..ಕಲಿತಾ ಇದ್ದೀನಿ..ಒಳ್ಳೆ ಮಜಾ ಬರ್ತಾ ಇದೆ ಜೀವನದಲ್ಲಿ..
ವೀಕೆಂಡ್ಸ್ ಬಂತು ಅಂದ್ರೆ ಸಾಕು ಎಲ್ಲರೂ ಸೇರಿ ಟ್ರಿಪ್ಪು ಅಂತ ಹೊರಡೋದು ....ಹೀಗೆ ಮಾಡ್ತಾ ಮಾಡ್ತಾ, ತಿರುಗ್ತಾ ತಿರುಗ್ತಾ ಸುಮಾರು ಜಾಗ ಮುಗಿಸಿ ಬಿಟ್ಟಿದೀವಿ .... ಊಟಿ , ಮುನ್ನಾರ್, ಯೇರ್ಕಾಡು, ತಿರುವನಂತಪುರಂ, ಕನ್ಯಾಕುಮಾರಿ, ವೇಳಿ, ಶಂಘಮುಗಂ, ವಾಳಪರೈ, ವೆಲ್ಲನಗಿರಿ ಹೀಗೆ ಎಲ್ಲ ಮುಗಿಸಿ ಬಿಟ್ಟಿದ್ದೇವೆ .... ಇನ್ನು ಸಲ್ಪ ಇದೆ.. ಏನ್ ಮಾಡೋದು ವೀಕೆಂಡ್ಸ್ ??? ಹೊರಡೋದು ಅಲ್ಲಿ ಇಲ್ಲಿ ಅಂತ ..ಅಲೆಮಾರಿ ಜೀವನ...
ಟ್ರಿಪ್ಪಿಗೆ ಹೋದಾಗ ಬರೋ ಮಜಾನೆ ಬೇರೆ... ಕಾಲು ಎಳೆಯೋದು ...ಜಗಳ ಮಾಡೋದು ....ಚಳಿಯಲ್ಲಿ ನಡುಗೋದು... ಪಶ್ಚಿಮ ಘಟ್ಟಗಳ ಸೌಂದರ್ಯ ಸವೀತಾ ಸವೀತಾ ಮನಸ್ಸು ಎಲ್ಲಿಗೋ ಹೋಗತ್ತೆ .... ಬಂಕಿಮ ಚಂದ್ರರು ಬರೆದ ವಂದೇ ಮಾತರಂ ಎಷ್ಟು ನಿಜ ಅಂತ ಅನಿಸದೆ ಇರದು.. ದೃಷ್ಟಿ ಹೋಗುವಷ್ಟು ದೂರ ಬೆಟ್ಟಗಳು.. ಚಹಾ ಗಿಡಗಳು ...ಓಕ್ ಮತ್ತು ಪೈನ್ ಮತ್ತು ನೀಲಗಿರಿ ಮರಗಳ ಎತ್ತರ ..ಕಣಿವೆಗಳ ಆಳ ....ನದಿಗಳ ಝುಳು ಝುಳು ....ಜಲಪಾತಗಳ ಭೋರ್ಗರೆತ ....ಮತ್ತು ನಮ್ಮ ಮಜಾ ಮಾಡೋ ಗ್ರೂಪ್... ಇನ್ನೇನು ಬೇಕು ಸಾರ್ ಸ್ವರ್ಗಕ್ಕೆ???
ಇದೆಲ್ಲಾ ಮಾಡಿ ಮುಗಿಸಿದ ಮೇಲೆ ಮರುದಿನ ಮತ್ತೆ ಆಫೀಸಿನ ಮೌನ, ಎ.ಸಿ ತಂಪು, ತಿರುಗುವ ಕುರ್ಚಿ , ಅದೇ ಕೋಡಿಂಗ್ , ಅದೇ ಬಗ್ಗು.... ಅಬ್ಬಾ... ಯಾಕೆ ನಾವೆಲ್ಲಾ ಇಷ್ಟು ಕಷ್ಟಾ ಪಡಬೇಕು ಅನಿಸ್ಸತ್ತೆ...
ಸುಮ್ನೆ ರಿಟೈರ್ ಆಗಿ ಯಾವುದೊ ಒಂದು ಹಿಲ್ ಸ್ಟೇಷನ್ನಲ್ಲಿ ಮನೆ ಮಾಡಿ ಹಾಯಾಗಿ ಇರೋಣ ಅಂತಾ... ಹೇಗಿದೆ ಐಡಿಯಾ ??
ವಾಟ್ ಏನ್ ಐಡಿಯಾ ಸರ್ ಜೀ ......
ಬನ್ನಿ ಕೊಯಮ್ಬತ್ತೂರಿಗೆ... ತೋರಿಸ್ತೀನಿ ಇಲ್ಲಿ ಇರೋ ಜಾಗಗಳನ್ನ ....
ಮತ್ತೆ ಸಿಗೋಣ...
ನಿಮ್ಮವ
-ಹರ್ಷ ...

0 people mind to share what they feel: