"ಲೇ ಎಲ್ಲಾರ ಟೂರ್ ಹೋಗುನಲೇ ....ಏನ್ ಸೂಟಿ ಬಿದ್ರ ಮನಿ ಮನಿ ಅಂತ ಸಾಯ್ತೀ .....ಲೇ ನಿನ್ನೌ*****...."
ಹೀಗೆ ನಮ್ಮ ಧಾರವಾಡ ಭಾಷೆಯಲ್ಲಿ ನನ್ನ ಗೆಳೆಯರನ್ನು ಹೆಳೆಯುವಾಗ ಯಾವತ್ತೂ ಯೋಚಿಸಿರಲಿಲ್ಲ .....ಅವರೆಲ್ಲಾ ಹಾಸ್ಟೆಲ್ ಅಲ್ಲಿ ಇರೋರು ಅಂತ....ಮನೆ ಬಿಟ್ಟು ದೂರದ ಊರಿಗೆ ಬಂದು ಓದು ಬರಹ ಅಂತ ಮಾಡಿ ,ಹಾಸ್ಟೆಲ್ಲಿನ ಭಯಂಕರವಾದ ಊಟ ಮಾಡಿ ..ದಿನಾಲೂ ಮನೆಯ ಊಟವನ್ನು ಮಿಸ್ ಮಾಡ್ತಾ ...ಅದರ ಬಗ್ಗೆ ನಮ್ಮ ಹತ್ರ ಹೇಳ್ತಾ ನಮಗೆ ಕೋಪ ಬರಿಸೋರು
ಯಾವಾಗಲು ಅನಿಸೋದು....ಏನ್ ಈ ನನ್ನ ಮಕ್ಕಳು ಮನೆ ,ಮನೆ ಅಂತ ಸಾಯ್ತಾರೆ...ಒಳ್ಳೆ ಟೂರ್ ಟ್ರಿಪ್ ಅಂತ ಹೋಗ್ತಾ ಮಜಾ ಮಾಡಬೇಕು ಅನ್ನೋದು ನನ್ನ ಥಿಯರಿ....ಅದು ಈಗಲೂ ನನ್ನ ಥಿಯರಿ ಹೌದು ಆದ್ರೆ ಈಗ ನಾನು ಕೂಡ ಅವರ ಗುಂಪಿಗೆ ಸೇರಿದ ಪುಣ್ಯಾತ್ಮ.... ಧಾರವಾಡದ ನನ್ನ ಮನೆ....ಅಪ್ಪ ಅಮ್ಮ..ಬಾಳಾ (ನನ್ನ ನಾಯಿ), ನನ್ನ ರೂಮು, ನನ್ನ ಕೆಂಪು ಚಾದರ, ನನ್ನ ರೂಮಿನ ಕಿಟಕಿಯಿಂದ ಕಾಣುವ ಬೆಳಗಿನ ಸೂರ್ಯ...ಅವನನ್ನು ಕೋಪದಿಂದ ಬೈಕೊಳ್ತಾ ಎದ್ದು ನನ್ನ ಬಾಥ್ರೂಮಿನಲ್ಲಿ ಮುಂದಿನ ೧ ಘಂಟೆ ...ಆಹಾ ...ಏನು ಆನಂದ..ಅದೆಲ್ಲಾ ಎಷ್ಟು ಬೇಕು ಅನಿಸ್ತಾ ಇದೆ ಈಗ...ಆದ್ರೆ ಇಳಿ ಇರೋದು ಏನು ಇಲ್ಲ....ಅಮ್ಮನ ಕೈ ಅಡಿಗೆ ಇಲ್ಲ....ಬಾಳನ ಜೊತೆ ಆಟ ಇಲ್ಲ...ದಿನಾಲೂ ರಾತ್ರಿ ತಡ ಮಾಡಿ ಬಂದರೆ ಬಯ್ಯೋಕೆ ಅಮ್ಮ ಇಲ್ಲ... :-( ಅವಳ ಕೈ ಅಡಿಗೆ ಇಲ್ಲ.... ಇನ್ನೂ ಬೇಜಾರು ಅಂದ್ರೆ ಇಲ್ಲಿ ನನ್ನದೇ ಅಡುಗೆ!!! ಯಾಕೆ ಇದೆಲ್ಲ ಈಗ ಹೇಳ್ತಾ ಇದೀನಿ ..... ಕಳೆದ ಒಂದು ವಾರದಿಂದ ಯುಗಾದಿ ಹಬ್ಬ ಯಾವಾಗ ಬರತ್ತೆ ಅಂತ ೧೦ ಸಾರಿ ನೋಡೀದಿನಿ...ದಿನಗಳು ಮುಂದೆ ಹೋಗೋದೇ ಇಲ್ಲ...ಮನೆ ಯಾವಾಗ ಮುಟ್ಟುತೀನೋ ಅಂತ ಆಗಿಬಿಟ್ಟಿದೆ...ಈಗ ಗೊತ್ತಾಯ್ತ ಅಮ್ಮನ ಅಡುಗೆ..ಮನೆ ಊಟ...ಮನೆಯಲ್ಲಿ ಬರೋ ಮಜಾ ಎಲ್ಲಾ ಏನು ಅಂತ!!! ಯುಗಾದಿ ದಿನ ನಮ್ಮ ಮನೆಯ ಕಹಿ ತಿಂದರೂ ಓಕೆ...ಆದ್ರೆ ಅಮ್ಮನ ನೋಡ್ಬೇಕು...ಅಪ್ಪನ ಕೈಲಿ ಮಾತಾಡಬೇಕು ...
ಇನ್ನೂ ೨ ವಾರ ಕಾಯಬೇಕು :-(
ಕಾಯ್ತೀನಿ.....
ಬೇರೆ ಗತಿ ಇಲ್ಲ....
ಸಿಗೋಣ ಮತ್ತೆ....
ಧನ್ಯವಾದಗಳು
7 years ago
2 people mind to share what they feel:
hmmm..ninna roomu maatu adara gabbu naatha, neenu ninna ammanna kaadodu,mane angaladalli aagiro tonde kaayi mattu adara balliyanna nodi nodi khushi padodu.. hmmm.. channagide.. bega yugadi barli..
@nivz: Thanks for reading...and nanna roomige enadru helidre sari irtille....nalige sigidu haakti...husshhaaaar...
and it's clean now.. naa irtnillyale ;-)
and tonde balli ille eega..now it is haagalkaayi (YUCK...!!!)...i hate it..
Post a Comment